'ವರ್ಡ್‍ಪ್ರೆಸ್ ಎಂಬುದು ಒಂದು ಮುಕ್ತ ಮೂಲದ ಪಠ್ಯವಿಷಯ ನಿರ್ವಹಣಾ ವ್ಯವಸ್ಥೆಯಾಗಿದ್ದು (ಕಂಟೆಂಟ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ-), ಮತ್ತು MySQLನಿಂದ ಚಾಲಿಸಲ್ಪಡುವ ಒಂದು ಬ್ಲಾಗ್‌ ಪ್ರಕಟಣಾ ಅನ್ವಯಿಕೆಯಾಗಿ ಇದು ಅನೇಕವೇಳೆ ಬಳಸಲ್ಪಡುತ್ತದೆ. ಒಂದು ಪ್ಲಗ್‌-ಇನ್‌ ವಿನ್ಯಾಸ ಮತ್ತು ಒಂದು ಪಡಿಯಚ್ಚು ವ್ಯವಸ್ಥೆಯನ್ನು ಒಳಗೊಂಡಂತೆ ಇದು ಅನೇಕ ವೈಶಿಷ್ಟ್ಯಪೂರ್ಣ ಲಕ್ಷಣಗಳನ್ನು ಹೊಂದಿದೆ. ೧,೦೦೦,೦೦೦ದಷ್ಟಿರುವ ಅತಿದೊಡ್ಡ ವೆಬ್‌ಸೈಟ್‌ಗಳ ಪೈಕಿ ೧೩%ಗೂ ಹೆಚ್ಚಿನವುಗಳಿಂದ ವರ್ಡ್‌ಪ್ರೆಸ್‌‌ ಬಳಸಲ್ಪಡುತ್ತದೆ. ಬಿ೨/ಕೆಫೆಲಾಗ್‌ನ ಒಂದು ಕವಲೊಡೆತವಾಗಿ ಮ್ಯಾಟ್‌ ಮುಲ್ಲೆನ್‌ವೆಗ್‌‌‌ನಿಂದ ೨೦೦೩ರ ಮೇ ೨೭ರಂದು ಇದು ಮೊದಲು ಬಿಡುಗಡೆಯಾಯಿತು. ೨೦೧೩ರ ಏಪ್ರಿಲ್ ವೇಳೆಗೆ ಇದ್ದಂತೆ, ಇದರ 3.5 ಆವೃತ್ತಿ ಯು 18 ದಶಲಕ್ಷಕ್ಕೂ ಹೆಚ್ಚು ಬಾರಿ ಡೌನ್‌ಲೋಡ್‌ ಮಾಡಲ್ಪಟ್ಟಿದೆ. == ವಿಶಿಷ್ಟ ಲಕ್ಷಣಗಳು == ಒಂದು ಪಡಿಯಚ್ಚು ಸಂಸ್ಕಾರಕವೊಂದನ್ನು ಬಳಸಿಕೊಳ್ಳುವ ಮೂಲಕ ವೆಬ್‌ ಪಡಿಯಚ್ಚು ವ್ಯವಸ್ಥೆಯೊಂದನ್ನು ವರ್ಡ್‌ಪ್ರೆಸ್‌‌ ಹೊಂದಿದೆ. ಅಥವಾ ಸಂಕೇತವನ್ನು ಪರಿಷ್ಕರಿಸದೆಯೇ ಬಳಕೆದಾರರು ಸಲಕರಣೆಗಳನ್ನು ಮರು-ವ್ಯವಸ್ಥೆಗೊಳಿಸಲು ಇಲ್ಲಿ ಸಾಧ್ಯವಿದೆ; ವಿಷಯ-ವಸ್ತುಗಳನ್ನು ಅಳವಡಿಸಲು ಮತ್ತು ಅವುಗಳ ನಡುವೆ ಬದಲಾಯಿಸಿಕೊಳ್ಳಲೂ ಸಹ ಬಳಕೆದಾರರಿಗೆ ಇಲ್ಲಿ ಅವಕಾಶವಿದೆ. ಹೆಚ್ಚು ಮುಂದುವರಿದ ಅಗತ್ಯಾನುಸಾರದ ರೂಪಿಸುವಿಕೆಗಳಿಗೆ ಸಂಬಂಧಿಸಿದಂತೆ ವಿಷಯ-ವಸ್ತುಗಳಲ್ಲಿನ ಮತ್ತು ಸಂಕೇತಗಳನ್ನೂ ಸಹ ಪರಿಷ್ಕರಿಸಲು ಇಲ್ಲಿ ಅವಕಾಶವಿದೆ. ಅನೇಕ ವೈಶಿಷ್ಟ್ಯತೆಗಳನ್ನೂ ಸಹ ವರ್ಡ್‌ಪ್ರೆಸ್‌‌ ಒಳಗೊಳ್ಳುತ್ತದೆ. ಸಂಯೋಜಿತ ಕೊಂಡಿಯ ನಿರ್ವಹಣೆ, ಒಂದು ಶೋಧಕ ಎಂಜಿನು-ಸ್ನೇಹಿ, ಚೊಕ್ಕನಾದ ಕಾಯಂಕೊಂಡಿಯ ರಚನೆ, ಒಂದರೊಳಗೆ ಒಂದನ್ನಿಟ್ಟು ಅಡಕಿಸಿದ ಬಹು ವರ್ಗಗಳನ್ನು ಲೇಖನಗಳಿಗೆ ನಿಯೋಜಿಸುವಲ್ಲಿನ ಸಾಮರ್ಥ್ಯ, ಮತ್ತು ಪ್ರಕಟಣೆಗಳು ಮತ್ತು ಲೇಖನಗಳ ಲಗತ್ತಿಸುವಿಕೆಗೆ ಸಂಬಂಧಿಸಿದಂತಿರುವ ಬೆಂಬಲ ಇವೆಲ್ಲವೂ ಇದರಲ್ಲಿ ಕಂಡುಬರುವ ವೈಶಿಷ್ಟ್ಯತೆಗಳಾಗಿವೆ. ಸ್ವಯಂಚಾಲಿತ ಸೋಸುಗಗಳೂ ಸಹ ಇದರಲ್ಲಿ ಸೇರಿಸಲ್ಪಟ್ಟಿದ್ದು, ಇದರಿಂದಾಗಿ ಲೇಖನಗಳಲ್ಲಿನ ಪಠ್ಯಕ್ಕೆ ಪ್ರಮಾಣಕವಾಗಿಸಲ್ಪಟ್ಟ ಫಾರ್ಮ್ಯಾಟ್‌ ಮಾಡುವಿಕೆ ಮತ್ತು ಶೈಲೀಕರಣವು ಒದಗಿಸಲ್ಪಡುತ್ತದೆ (ಉದಾಹರಣೆಗೆ, ಎಂದಿನ ನಿಯತಶೈಲಿಯ ಸೂಕ್ತಿಗಳನ್ನು ಚೆಂದದ ಸೂಕ್ತಿಗಳಾಗಿ ಪರಿವರ್ತಿಸುವಿಕೆ). ಒಂದು ಪ್ರಕಟಣೆ ಅಥವಾ ಲೇಖನಕ್ಕೆ ಸ್ವತಃ ತಾವೇ ಸಂಪರ್ಕಿಸಲ್ಪಟ್ಟ ಇತರ ತಾಣಗಳಿಗಿರುವ ಪ್ರದರ್ಶಕ ಕೊಂಡಿಗಳಿಗೆ ಸಂಬಂಧಿಸಿದ ಮಾನದಂಡಗಳ ಮರುಜಾಡು ಹಿಡಿಯುವಿಕೆ ಮತ್ತು ಮರುಪತ್ತೆಹಚ್ಚುವಿಕೆಯಂಥ ಪ್ರಕ್ರಿಯೆಗಳಿಗೂ ಸಹ ವರ್ಡ್‌ಪ್ರೆಸ್‌‌ ಬೆಂಬಲ ನೀಡುತ್ತದೆ. ಅಂತಿಮವಾಗಿ ಹೇಳುವುದಾದರೆ, ಒಂದು ಸಮೃದ್ಧ ಪ್ಲಗ್‌ಇನ್‌ ವಿನ್ಯಾಸವನ್ನು ವರ್ಡ್‌ಪ್ರೆಸ್‌ ಹೊಂದಿದ್ದು, ಮೂಲಭೂತ ಅಳವಡಿಕೆಯ ಭಾಗವಾಗಿ ಬರುವ ಲಕ್ಷಣಗಳಿಗಿಂತ ಆಚೆಗಿನ ಇದರ ಕಾರ್ಯಾತ್ಮಕತೆಯನ್ನು ಬಳಕೆದಾರರು ಮತ್ತು ಅಭಿವರ್ಧಕರು ವಿಸ್ತರಿಸುವಲ್ಲಿ ಈ ವಿನ್ಯಾಸವು ಅವಕಾಶ ಕಲ್ಪಿಸುತ್ತದೆ. ಆಂಡ್ರಾಯ್ಡ್‌, ಐಫೋನ್‌/ಐಪಾಡ್‌ ಟಚ್‌, ಮತ್ತು ಬ್ಲ್ಯಾಕ್‌ಬೆರಿ ಇವುಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಅನ್ವಯಿಕೆಗಳು ಅಸ್ತಿತ್ವದಲ್ಲಿದ್ದು, ವರ್ಡ್‌ಪ್ರೆಸ್‌‌ ನಿರ್ವಹಣಾ ಪಟ್ಟಿಯಲ್ಲಿನ ಕೆಲವೊಂದು ವೈಶಿಷ್ಟ್ಯಪೂರ್ಣ ಲಕ್ಷಣಗಳಿಗೆ ಅವು ಸಂಪರ್ಕ ಒದಗಿಸುತ್ತವೆ; ಅಷ್ಟೇ ಅಲ್ಲ, .comನೊಂದಿಗೆ ಮತ್ತು .orgನ ಅನೇಕ ಬ್ಲಾಗ್‌ಗಳೊಂದಿಗೆ ಅವು ಕಾರ್ಯನಿರ್ವಹಿಸುತ್ತವೆ. == ನಿಯೋಜನೆ == ಆಯೋಜಿಸುವ ಪರಿಸರವೊಂದರ (ಹೋಸ್ಟಿಂಗ್‌ ಎನ್ವಿರಾನ್ಮೆಂಟ್‌) ಮೇಲೆ ಹಲವಾರು ವಿಧಾನಗಳನ್ನು ಬಳಸಿಕೊಳ್ಳುವ ಮೂಲಕ ವರ್ಡ್ ಪ್ರೆಸ್ ಅನ್ನು ಸಜ್ಜುಗೊಳಿಸಲು ಸಾಧ್ಯವಿದೆ. . ನಿಂದ ವರ್ಡ್ ಪ್ರೆಸ್ ನ ಪ್ರಸಕ್ತ ಆವೃತ್ತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಲುವ, ಆಯ್ಕೆಯನ್ನು ಬಳಕೆದಾರರು ಹೊಂದಿರುತ್ತಾರೆ. ಅಲ್ಲಿಂದ, ಅವರು ತಮ್ಮ ವೆಬ್‌ ಆಯೋಜಕ ಪರಿಸರಕ್ಕೆ ಮೂಲ ಸಂಕೇತ ಮತ್ತು ಅದರ ಆಧಾರವಾಗಿರುವ ಸಾಧನಗಳನ್ನು ಅಪ್‌ಲೋಡ್‌ ಮಾಡಲು ಅವಕಾಶವಿರುತ್ತದೆ. ಬಹುಉದ್ದೇಶಿತ ತಂತ್ರಾಂಶ ನಿರ್ವಹಣಾ ವ್ಯವಸ್ಥೆಯ ಮೂಲಕ ಅಥವಾ ಕೈಯಿಂದ ನಡೆಸುವ ಯಾವುದೇ ಸಜ್ಜಿಕೆ ಅಥವಾ ರೂಪರೇಖೆಯನ್ನು ಬಯಸದ, ಬಳಕೆಗೆ ಸಿದ್ಧವಿರುವ ಟರ್ನ್‌ಕೀ ವರ್ಡ್‌ಪ್ರೆಸ್‌‌ ಸಾಧನವೊಂದನ್ನು ಸಜ್ಜುಗೊಳಿಸುವ ಮೂಲಕ ವರ್ಡ್‌ಪ್ರೆಸ್‌‌ನ್ನು ಅಳವಡಿಸಲು ಸಾಧ್ಯವಿದೆ. ವಿಂಡೋಸ್‌ ಮತ್ತು ಮೇಲೆ ವರ್ಡ್ ಪ್ರೆಸ್ ಅನ್ನು ಅಳವಡಿಸುವ ಮೈಕ್ರೋಸಾಫ್ಟ್‌‌ ವೆಬ್‌ ವೇದಿಕೆ ಪ್ರತಿಷ್ಠಾಪಕವನ್ನು (ಮೈಕ್ರೋಸಾಫ್ಟ್‌‌ ವೆಬ್‌ ಪ್ಲಾಟ್‌ಫಾರಂ ಇನ್‌ಸ್ಟಾಲರ್‌ನ್ನು) ಬಳಸುವ ಮೂಲಕವೂ ವರ್ಡ್‌ಪ್ರೆಸ್‌‌ನ್ನು ಅಳವಡಿಸಲು ಸಾಧ್ಯವಿದೆ. ಅಥವಾ MySQLನಂತಹ ಯಾವುದೇ ತಪ್ಪಿಹೋಗಿರುವ ಆಧಾರ-ಸಾಧನಗಳನ್ನು ವೆಬ್‌ ಸ್ವಯಂಚಾಲಿತವಾಗಿ ಪತ್ತೆಹಚ್ಚುತ್ತದೆ ಮತ್ತು ವರ್ಡ್‌ಪ್ರೆಸ್‌ನ್ನು ಅಳವಡಿಸುವುದಕ್ಕೆ ಮುಂಚಿತವಾಗಿ ಅವುಗಳ ವಿನ್ಯಾಸವನ್ನು ರಚಿಸುತ್ತದೆ. ಬಹಳಷ್ಟು ವೆಬ್‌ ಆಯೋಜಕ ಸಂಸ್ಥೆಗಳು ತಮ್ಮ ಬಹುಉದ್ದೇಶಿತ ತಂತ್ರಾಂಶಗಳಲ್ಲಿ ಫೆಂಟಾಸ್ಟಿಕೊದಂಥ ಏಕ-ಕ್ಲಿಕ್‌ ಲಿಪಿಯ ಸ್ವಯಂ ಪ್ರತಿಷ್ಠಾಪಕ ಕಾರ್ಯಸೂಚಿಯನ್ನು ನೀಡುತ್ತವೆ. ಇಂಥ ಕಾರ್ಯಸೂಚಿಯ ಮೂಲಕ ವರ್ಡ್‌ಪ್ರೆಸ್‌‌ನ್ನು ಬಳಕೆದಾರರು ಸರಳವಾಗಿ ಅಳವಡಿಸಬಹುದಾಗಿರುತ್ತದೆ. ಮುಂದುವರಿದ ಅಥವಾ ಪ್ರಗತಿಶೀಲ ಬಳಕೆದಾರರು ತಮ್ಮದೇ ಸರ್ವರ್‌ಗೆ ವರ್ಡ್ ಪ್ರೆಸ್ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಮತ್ತು SVNನ್ನು ಬಳಸಿಕೊಂಡು ಅದನ್ನು ಸುಸಂಗತವಾಗಿ ಪರಿಷ್ಕರಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಸುಲಭವಾಗಿ ಪರಿಷ್ಕರಣಕ್ಕೆ ಒಳಗಾಗುವಲ್ಲಿ ಇದು ಬಳಕೆದಾರರಿಗೆ ಅವಕಾಶ ಕಲ್ಪಿಸುತ್ತದೆ. ಬಳಕೆದಾರರು ತಮ್ಮದೇ ಆದ ವೆಬ್‌ ಸರ್ವರ್‌ನಲ್ಲಿ ವರ್ಡ್‌ಪ್ರೆಸ್‌‌ನ್ನು ಅಳವಡಿಸುವ ಗೋಜಿಗೆ ಹೋಗದೆಯೇ, ಆನ್‌ಲೈನ್‌ ಮೂಲಕ ವರ್ಡ್‌ಪ್ರೆಸ್‌‌ ಬ್ಲಾಗ್‌ ಒಂದನ್ನು ಸಜ್ಜುಗೊಳಿಸಲು ಸಾಧ್ಯವಾಗುವಂತಹ ಸುಲಭ ಮಾರ್ಗವೊಂದನ್ನು .comನಂಥ ಉಚಿತವಾದ ಆಯೋಜಕ ಸೇವೆಗಳು ನೀಡುತ್ತವೆ. ಉಚಿತವಾದ ಆಯೋಜಕ ಸೇವೆಗೆ ದಾಖಲಾದ ನಂತರ ಉಪವ್ಯಾಪ್ತಿಯ ಖಾತೆಯೊಂದು (ಉದಾಹರಣೆಗೆ ..) ಸೃಷ್ಟಿಸಲ್ಪಡುತ್ತದೆ. ಹಂಚಿಕೆಗೆ ಒಳಗಾಗಿರುವ ಅನೇಕ ವೆಬ್‌ ಆಯೋಜಕ ಸೇವೆಗಳೂ ಸಹ ತಮ್ಮ ನಿಯಂತ್ರಣಾ ಪಟ್ಟಿಯ ಮೂಲಕ ಸ್ವಯಂಚಾಲಿತ ವರ್ಡ್‌ಪ್ರೆಸ್‌‌ ಅಳವಡಿಕೆಯನ್ನು ನೀಡುತ್ತವೆ. == ಇತಿಹಾಸ == ಸರಳವಾಗಿ b೨ ಅಥವಾ ಕೆಫೆಲಾಗ್‌ ಎಂಬುದಾಗಿ ಹೆಚ್ಚು ಸಾಮಾನ್ಯವಾಗಿ ಪರಿಚಿತವಾಗಿರುವ ಬಿ೨/ಕೆಫೆಲಾಗ್‌‌ , ವರ್ಡ್ ಪ್ರೆಸ್ ಗೆ ಇದ್ದ ಪೂರ್ವವರ್ತಿಯಾಗಿತ್ತು. ೨೦೦೩ರ ಮೇ ತಿಂಗಳ ವೇಳೆಗೆ ಇದ್ದಂತೆ, ಸರಿಸುಮಾರಾಗಿ ೨,೦೦೦ ಬ್ಲಾಗ್‌ಗಳಲ್ಲಿ ಬಿ೨/ಕೆಫೆಲಾಗ್‌ ಬಳಸಲ್ಪಟ್ಟಿದೆ ಎಂದು ಅಂದಾಜಿಸಲ್ಪಟ್ಟಿದೆ. MySQLನೊಂದಿಗೆ ಬಳಸಲ್ಪಡಲು ಅನುವಾಗುವಂತೆ ಇದು ಮೈಕೇಲ್‌ ವಾಲ್ಡ್ರೈಘಿಯಿಂದ PHPಯಲ್ಲಿ ಬರೆಯಲ್ಪಟ್ಟಿತು. ಈತ ವರ್ಡ್‌ಪ್ರೆಸ್‌‌ಗೆ ಈಗ ಲೇಖನ ನೀಡುತ್ತಿರುವ ಓರ್ವ ಅಭಿವರ್ಧಕನಾಗಿದ್ದಾನೆ. ವರ್ಡ್‌ಪ್ರೆಸ್‌‌ ಎಂಬುದು ಅಧಿಕೃತ ಉತ್ತರಾಧಿಕಾರಿಯಾಗಿದ್ದರೂ ಸಹ, ಬಿ೨ಎವಲ್ಯೂಷನ್‌ ಎಂಬ ಮತ್ತೊಂದು ಯೋಜನೆಯೂ ಸಕ್ರಿಯ ಅಭಿವೃದ್ಧಿಯಲ್ಲಿದೆ. b೨ವಿನ ಒಂದು ಕವಲೊಡೆತವನ್ನು ಸೃಷ್ಟಿಸುವುದಕ್ಕೆ ಸಂಬಂಧಿಸಿದಂತೆ ಮ್ಯಾಟ್‌ ಮುಲ್ಲೆನ್‌ವೆಗ್‌ ಮತ್ತು ಮೈಕ್‌ ಲಿಟ್ಲ್‌ ನಡುವೆ ನಡೆದ ಒಂದು ಜಂಟಿ ಪ್ರಯತ್ನವಾಗಿ ೨೦೦೩ರಲ್ಲಿ ವರ್ಡ್‌ಪ್ರೆಸ್‌‌ ಮೊದಲು ಕಾಣಿಸಿಕೊಂಡಿತು. ಮುಲ್ಲೆನ್‌ವೆಗ್‌ನ ಓರ್ವ ಸ್ನೇಹಿತೆಯಾದ ಕ್ರಿಸ್ಟೀನ್‌‌ ಸೆಲ್ಲೆಕ್‌ ಎಂಬಾಕೆಯಿಂದ ವರ್ಡ್‌ಪ್ರೆಸ್‌‌ ಎಂಬ ಹೆಸರು ಸೂಚಿಸಲ್ಪಟ್ಟಿತು. ಸ್ಪರ್ಧಾಶೀಲ ಮೂವಬಲ್‌ ಟೈಪ್‌ ಬಹುಉದ್ದೇಶಿತ ತಂತ್ರಾಂಶಕ್ಕೆ ಸಂಬಂಧಿಸಿದ್ದ ಪರವಾನಗಿಯ ಷರತ್ತುಗಳು ೨೦೦೪ರಲ್ಲಿ ಸಿಕ್ಸ್‌ ಅಪಾರ್ಟ್‌‌ನಿಂದ ಬದಲಾಯಿಸಲ್ಪಟ್ಟವು ಮತ್ತು ಅದರ ಅತ್ಯಂತ ಪ್ರಭಾವಶಾಲಿ ಬಳಕೆದಾರರಲ್ಲಿ ಅನೇಕರು ವರ್ಡ್‌ಪ್ರೆಸ್‌‌ಗೆ ವಲಸೆ ಹೋದರು. ೨೦೦೯ರ ಅಕ್ಟೋಬರ್ ವೇಳೆಗೆ‌‌, ಮುಕ್ತ ಮೂಲದ CMSನ ಮಾರುಕಟ್ಟೆ ಪಾಲಿನ ವರದಿಯು ತಳೆದ ನಿರ್ಣಯವೊಂದರ ಅನುಸಾರ, ಬೇರಾವುದೇ ಮುಕ್ತ ಮೂಲ ಪಠ್ಯವಿಷಯ ನಿರ್ವಹಣಾ ವ್ಯವಸ್ಥೆಗಳು ಹೊಂದಿದ್ದಕ್ಕಿಂತ ಮಹತ್ತರವಾದ ಬ್ರಾಂಡ್‌ ಶಕ್ತಿಯನ್ನು ವರ್ಡ್‌ಪ್ರೆಸ್‌ ಹೊಂದಿತ್ತು ಎಂದು ಕಂಡುಬಂತು. === ಪ್ರಶಸ್ತಿಗಳು === ೨೦೦೭ರಲ್ಲಿ ಪ್ಯಾಕ್ಟ್‌ ಮುಕ್ತ ಮೂಲದ ಪ್ರಶಸ್ತಿಯೊಂದನ್ನು ವರ್ಡ್ ಪ್ರೆಸ್ ಗೆದ್ದಿತು. ೨೦೦೯ರಲ್ಲಿ ಅತ್ಯುತ್ತಮ ಮುಕ್ತ ಮೂಲದ ಪ್ರಶಸ್ತಿಯನ್ನು ವರ್ಡ್‌ಪ್ರೆಸ್‌‌ ಗೆದ್ದಿತು. === ಪ್ರಾಯೋಜಿತ ವಿಷಯ-ವಸ್ತುಗಳನ್ನು ತೆಗೆದುಹಾಕುವಿಕೆ === ವರ್ಡ್ ಪ್ರೆಸ್ ಪರಿಕಲ್ಪನೆಗಳ ವೇದಿಕೆಯಲ್ಲಿ ನಡೆದ ಚರ್ಚೆಯೊಂದನ್ನು ಅನುಸರಿಸಿ ಮತ್ತು ಮಾರ್ಕ್‌ ಘೋಷ್‌ ತನ್ನ ವೆಬ್ಲಾಗ್‌ ಟೂಲ್ಸ್‌ ಕಲೆಕ್ಷನ್‌ ಎಂಬ ಬ್ಲಾಗ್‌ನಲ್ಲಿ ನೀಡಿದ ಪ್ರಕಟಣೆಯೊಂದನ್ನು ಅನುಸರಿಸಿ, ೨೦೦೭ರ ಜುಲೈ ೧೦ರಂದು ಮ್ಯಾಟ್‌ ಮುಲ್ಲೆನ್‌ವೆಗ್‌ ಪ್ರಕಟಣೆಯೊಂದನ್ನು ನೀಡಿದ; ://..netನಲ್ಲಿ ಲಭ್ಯವಿರುವ ವರ್ಡ್‌ಪ್ರೆಸ್‌‌ ವಿಷಯ-ವಸ್ತುವಿನ ಅಧಿಕೃತ ನಿರ್ದೇಶಿಕೆಯು ಪ್ರಾಯೋಜಿತ ಕೊಂಡಿಗಳನ್ನು ಹೊಂದಿರುವ ವಿಷಯ-ವಸ್ತುಗಳನ್ನು ಇನ್ನುಮುಂದೆ ಆಯೋಜಿಸುವುದಿಲ್ಲ ಎಂಬುದೇ ಆ ಪ್ರಕಟಣೆಯಾಗಿತ್ತು. ಪ್ರಾಯೋಜಿತ ವಿಷಯ-ವಸ್ತುಗಳ ವಿನ್ಯಾಸಕಾರರು ಮತ್ತು ಬಳಕೆದಾರರಿಂದ ಈ ಕ್ರಮವು ಟೀಕಿಸಲ್ಪಟ್ಟಿತಾದರೂ, ಇಂಥ ವಿಷಯ-ವಸ್ತುಗಳನ್ನು ಸ್ಪ್ಯಾಮ್ ಅಥವಾ ಕಳಪೆ ವಸ್ತುಗಳು ಎಂಬುದಾಗಿ ಪರಿಗಣಿಸುವ ವರ್ಡ್‌ಪ್ರೆಸ್‌‌ ಬಳಕೆದಾರರಿಂದ ಈ ಕ್ರಮವು ಶ್ಲಾಘಿಸಲ್ಪಟ್ಟಿತು. ಸದರಿ ಪ್ರಕಟಣೆಯನ್ನು ಮಾಡಿದ ಕೆಲಕಾಲದ ನಂತರ, ಪ್ರಾಯೋಜಿತ ಕೊಂಡಿಗಳಿರದ ವಿಷಯ-ವಸ್ತುಗಳೂ ಸೇರಿದಂತೆ ಯಾವುದೇ ಹೊಸ ವಿಷಯ-ವಸ್ತುಗಳನ್ನು ಸ್ವೀಕರಿಸುವುದನ್ನು ವರ್ಡ್‌ಪ್ರೆಸ್‌‌ ವಿಷಯ-ವಸ್ತುವಿನ ಅಧಿಕೃತ ನಿರ್ದೇಶಿಕೆಯು ನಿಲ್ಲಿಸಿತು. ಪ್ರಾಯೋಜಿತ ವಿಷಯ-ವಸ್ತುಗಳು ಈಗಲೂ ಎಲ್ಲೆಡೆ ಲಭ್ಯವಿವೆ; ಅಷ್ಟೇ ಅಲ್ಲ, ಮೂರನೇ ಪಕ್ಷಸ್ಥರಿಂದ ಸೇರ್ಪಡೆ ಮಾಡಲ್ಪಟ್ಟಿರುವ ಹೆಚ್ಚುವರಿ ಪ್ರಾಯೋಜಿತ ಕೊಂಡಿಗಳೊಂದಿಗಿನ ಉಚಿತವಾದ ವಿಷಯ-ವಸ್ತುಗಳು ಕೂಡಾ ಲಭ್ಯವಿವೆ. ೨೦೦೮ರ ಜುಲೈ ೧೮ರಂದು ://.///ನಲ್ಲಿ ವಿಷಯ-ವಸ್ತುವಿನ ಹೊಸ ನಿರ್ದೇಶಿಕೆಯೊಂದು ಪ್ರಾರಂಭವಾಯಿತು. ಪ್ಲಗ್‌-ಇನ್‌ಗಳ ನಿರ್ದೇಶಿಕೆಯ ಮಾದರಿಯಲ್ಲಿಯೇ ಇದು ವಿನ್ಯಾಸಗೊಳಿಸಲ್ಪಟ್ಟಿತ್ತು; ಇದಕ್ಕೆ ಅಪ್‌ಲೋಡ್ ಮಾಡಲಾದ ಯಾವುದೇ ವಿಷಯ-ವಸ್ತುವೂ ಕೂಲಂಕಷವಾಗಿ ಪರಿಶೀಲಿಸಲ್ಪಡುತ್ತದೆ. ಅಂದರೆ, ಸ್ವಯಂಚಾಲನಗೊಳಿಸಲ್ಪಟ್ಟ ಕಾರ್ಯಸೂಚಿಯೊಂದರಿಂದ ಮೊದಲಿಗೆ ಹಾಗೂ ಮಾನವ ಹಸ್ತಕ್ಷೇಪವೊಂದರ ಮೂಲಕ ನಂತರದಲ್ಲಿ ಈ ಪ್ರಕ್ರಿಯೆಯು ನಡೆಯುತ್ತದೆ. ೨೦೦೮ರ ಡಿಸೆಂಬರ್‌ ೧೨ರಂದು, ೨೦೦ಕ್ಕೂ ಹೆಚ್ಚಿನ ವಿಷಯ-ವಸ್ತುಗಳನ್ನು ವರ್ಡ್‌ಪ್ರೆಸ್‌‌ನ ವಿಷಯ-ವಸ್ತು ನಿರ್ದೇಶಿಕೆಯಿಂದ ತೆಗೆದುಹಾಕಲಾಯಿತು; ಅವು ಪರವಾನಗಿಯ ಅವಶ್ಯಕತೆಗಳೊಂದಿಗೆ ಸರಿಹೊಂದಿಕೊಳ್ಳದಿದ್ದುದೇ ಇದಕ್ಕೆ ಕಾರಣವಾಗಿತ್ತು. ಇಂದು ಪ್ರತಿಯೊಂದು ವಿಷಯ-ವಸ್ತುವಿನಲ್ಲಿಯೂ ಲೇಖಕ ನಮೂದುಗಳಿಗೆ ಅನುಮತಿಸಲಾಗಿದೆಯಾದರೂ, GPLಗೆ ಹೊಂದಿಕೆಯಾಗದ ವಿಷಯ-ವಸ್ತುಗಳನ್ನು ವಿತರಿಸುವ ತಾಣಗಳಿಗೆ ಇರುವ ಪ್ರಾಯೋಜಕತೆಗಳು ಅಥವಾ ಕೊಂಡಿಗಳಿಗೆ ಸಂಬಂಧಿಸಿದಂತೆ ಅಧಿಕೃತ ಕಾರ್ಯನೀತಿಯು ಅವಕಾಶ ನೀಡುವುದಿಲ್ಲ. ಅನುವರ್ತನಶೀಲವಲ್ಲದ ವಿಷಯ-ವಸ್ತುಗಳು ಈಗ ಇತರ ವಿಷಯ-ವಸ್ತು ನಿರ್ದೇಶಿಕೆಗಳ ತಾಣದ ವಲಯದಲ್ಲಿ ಆಯೋಜಿಸಲ್ಪಡುತ್ತಿವೆ. === ಬಿಡುಗಡೆಗಳು === ೧.೦ರ ಆವೃತ್ತಿಯ ನಂತರ ಆರಂಭವಾಗುವ ಬಹುಪಾಲು ವರ್ಡ್‌ಪ್ರೆಸ್‌‌ ಬಿಡುಗಡೆಗಳು ಸುಪರಿಚಿತ ಜಾಝ್‌ ಸಂಗೀತಗಾರರ ಹೆಸರಿನಲ್ಲಿ ಸಂಕೇತದ ಹೆಸರನ್ನಿಟ್ಟುಕೊಂಡಿವೆ. == ಭವಿಷ್ಯ == ವರ್ಡ್‌ಪ್ರೆಸ್‌‌ ೩.೦ರ ಆವೃತ್ತಿಯ ಬಿಡುಗಡೆಯ ನಂತರ, ವರ್ಡ್‌ಪ್ರೆಸ್‌‌ ಬ್ಲಾಗ್‌ನ್ನು ಮ್ಯಾಟ್‌ ಮುಲ್ಲೆನ್‌ವೆಗ್‌ ಪರಿಷ್ಕರಿಸಿದ. ವರ್ಡ್‌ಪ್ರೆಸ್‌‌ ಸಮುದಾಯವನ್ನು ವಿಸ್ತರಿಸುವುದರ ಮತ್ತು ಸುಧಾರಿಸುವುದರ ಕುರಿತಾಗಿ ಗಮನ ಹರಿಸುವ ದೃಷ್ಟಿಯಿಂದ ಅವನ ತಂಡವು ವರ್ಡ್‌ಪ್ರೆಸ್‌‌ ತಂತ್ರಾಂಶದಿಂದ ಬಿಡುಗಡೆಯ ಆವರ್ತನವೊಂದನ್ನು ದೂರಸರಿಸುತ್ತಿದೆ ಎಂಬುದನ್ನು ಸಮುದಾಯವು ಅರಿಯಲು ಇದು ಅವಕಾಶ ಕಲ್ಪಿಸಿತು. ವರ್ಡ್‌ಪ್ರೆಸ್‌‌ ೩.೧ ಮತ್ತು ೩.೨ರ ಆವೃತ್ತಿಗಳ ಬಿಡುಗಡೆಯು ೨೦೧೧ರ ಆರಂಭದಲ್ಲಿ ಮತ್ತು ೨೦೧೧ರ ಪ್ರಥಮಾರ್ಧದಲ್ಲಿ ಕ್ರಮವಾಗಿ ಆಗಲಿದೆ. ೩.೨ರ ಆವೃತ್ತಿಯ ಬಿಡುಗಡೆಯ ನಂತರ, ಕನಿಷ್ಟ ಅವಶ್ಯಕತೆಯ ಆವೃತ್ತಿ ಮತ್ತು MySQLನ್ನೂ ಸಹ ಉನ್ನತೀಕರಿಸಲಾಗುವುದು. == ಭೇದ್ಯಗಳು == ತಂತ್ರಾಂಶದಲ್ಲಿನ ಅನೇಕ ಭದ್ರತಾ ಸಮಸ್ಯೆಗಳು, ನಿರ್ದಿಷ್ಟವಾಗಿ ೨೦೦೭ ಮತ್ತು ೨೦೦೮ರಲ್ಲಿ, ಬಹಿರಂಗವಾದವು. ಸೆಕ್ಯುನಿಯಾದ ಅನುಸಾರ, ೨೦೦೯ರ ಏಪ್ರಿಲ್‌ನಲ್ಲಿ ಸರಿಹೊಂದಿಸಿರದ ೭ ಭದ್ರತಾ ಸಲಹಾ ವ್ಯವಸ್ಥೆಗಳನ್ನು (ಒಟ್ಟು ೩೨ ವ್ಯವಸ್ಥೆಗಳ ಪೈಕಿ) ವರ್ಡ್‌ಪ್ರೆಸ್‌ ಹೊಂದಿತ್ತು ಮತ್ತು ಅವು "ಕಡಿಮೆ ನಿರ್ಣಾಯಕ" ಎಂಬ ಒಂದು ಗರಿಷ್ಟ ಶ್ರೇಯಾಂಕವನ್ನು ಹೊಂದಿದ್ದವು. ಸದ್ಯೋಚಿತವಾಗಿರುವ ವರ್ಡ್‌ಪ್ರೆಸ್‌‌ ಭೇದ್ಯಗಳ ಪಟ್ಟಿಯೊಂದನ್ನು ಸೆಕ್ಯುನಿಯಾ ಕಾಯ್ದುಕೊಂಡಿದೆ. ಉನ್ನತ-ಮಟ್ಟದ ಅಥವಾ ಗಮನ ಸೆಳೆಯುವ ಶೋಧಕ ಎಂಜಿನು ಅತ್ಯುತ್ತಮವಾಗಿಸುವಿಕೆಯ (ಸರ್ಚ್‌ ಎಂಜಿನ್‌ ಆಪ್ಟಿಮೈಸೇಷನ್‌-) ಅನೇಕ ಬ್ಲಾಗ್‌ಗಳಷ್ಟೇ ಅಲ್ಲದೇ, ಆಡ್‌ಸೆನ್ಸ್‌‌‌ನ್ನು ಒಳಗೊಂಡಿರುವ ಗಮನ ಸೆಳೆಯದಿರುವ ಅನೇಕ ವಾಣಿಜ್ಯ ಬ್ಲಾಗ್‌ಗಳ ಮೇಲೆ ಗುರಿಯಿಟ್ಟುಕೊಂಡು ೨೦೦೭ರ ಜನವರಿಯಲ್ಲಿ, ವರ್ಡ್‌ಪ್ರೆಸ್‌‌ ಸಾಹಸಕಾರ್ಯದ ಯಶಸ್ವೀ ದಾಳಿಮಾಡಲಾಯಿತು. ಯೋಜನಾ ತಾಣದ ವೆಬ್‌ ಸರ್ವರ್‌‌ಗಳ ಪೈಕಿ ಒಂದರ ಮೇಲಿನ ಪ್ರತ್ಯೇಕ ಭೇದ್ಯತೆಯೊಂದು, ವರ್ಡ್‌ಪ್ರೆಸ್‌‌ ೨.೧.೧ರ ಆವೃತ್ತಿಯ ಕೆಲವೊಂದು ಡೌನ್‌ಲೋಡ್‌ಗಳಿಗಿರುವ ಹಿಂಬಾಗಿಲಿನ ಸ್ವರೂಪವೊಂದರಲ್ಲಿ ಉಪಯೋಗಕ್ಕೆ ಬರುವ ಸಂಕೇತವನ್ನು ಪರಿಚಯಿಸುವುದಕ್ಕೆ ದಾಳಿಕಾರನೊಬ್ಬನಿಗೆ ಅವಕಾಶಮಾಡಿಕೊಟ್ಟಿತು. ೨.೧.೨ರ ಬಿಡುಗಡೆಯು ಈ ಸಮಸ್ಯೆಯನ್ನು ಸರಿಪಡಿಸಿತು; ಈ ಸಮಯದಲ್ಲಿ ಬಿಡುಗಡೆಯಾದ ಸಲಹಾ ವ್ಯವಸ್ಥೆಯೊಂದು ತತ್‌ಕ್ಷಣದಲ್ಲಿ ಉನ್ನತೀಕರಿಸುವುದರ ಕುರಿತು ಎಲ್ಲಾ ಬಳಕೆದಾರರಿಗೆ ಸಲಹೆ ನೀಡಿತು. ಚಾಲಿಸಲ್ಪಡುತ್ತಿರುವ ವರ್ಡ್‌ಪ್ರೆಸ್‌‌ ಬ್ಲಾಗ್‌ಗಳ ಪೈಕಿ ೯೮%ನಷ್ಟು ಬ್ಲಾಗ್‌ಗಳು ಉಪಯೋಗಕ್ಕೆ ಬರುವ ರೀತಿಯಲ್ಲಿದ್ದವು ಎಂಬ ಅಂಶವನ್ನು ೨೦೦೭ರ ಮೇ ತಿಂಗಳಲ್ಲಿ ಅಧ್ಯಯನವೊಂದು ಹೊರಗೆಡವಿತು; ಏಕೆಂದರೆ ತಂತ್ರಾಂಶದ ಹಳತಾದ ಮತ್ತು ಬೆಂಬಲವಿಲ್ಲದ ಆವೃತ್ತಿಗಳನ್ನು ಓಡಿಸುತ್ತಿದ್ದವು. ಭದ್ರತಾ ಪ್ರತಿಕ್ರಿಯಾ ತಂಡದ ಸಂಸ್ಥಾಪಕನಾದ ಸ್ಟೆಫೆನ್‌ ಎಸ್ಸರ್ ಎಂಬಾತ ೨೦೦೭ರ ಜೂನ್‌ನಲ್ಲಿ ಬಂದ ಸಂದರ್ಶನವೊಂದರಲ್ಲಿ ವರ್ಡ್‌ಪ್ರೆಸ್‌‌ನ ಭದ್ರತಾ ಪಥದ ದಾಖಲೆಯ ಕುರಿತಾಗಿ ನಿರ್ಣಾಯಕವಾಗಿ ಮಾತನಾಡಿದ; ಅನ್ವಯಿಕೆಯ ವಿನ್ಯಾಸದೊಂದಿಗಿರುವ ಸಮಸ್ಯೆಗಳನ್ನು ಆತ ಈ ಸಂದರ್ಭದಲ್ಲಿ ಉಲ್ಲೇಖಿಸುತ್ತಾ, ಒಳಹೊಗಿಸುವಿಕೆಯ ಭೇದ್ಯಗಳಷ್ಟೇ ಅಲ್ಲದೇ ಕೆಲವೊಂದು ಇತರ ಸಮಸ್ಯೆಗಳಿಂದ ದುರ್ಭೇಧ್ಯವಾಗಿರುವ ಸಂಕೇತದ ಬರೆಯುವಿಕೆಯನ್ನು ಸದರಿ ವಿನ್ಯಾಸವು ಅನವಶ್ಯಕವಾಗಿ ಕಷ್ಟಕರವಾಗಿಸಿದೆ ಎಂದು ತಿಳಿಸಿದ. == ಬಹು-ಬ್ಲಾಗಿಂಗ್‌ == ವರ್ಡ್‌ಪ್ರೆಸ್‌‌ ೩.೦ರ ಆವೃತ್ತಿಗೆ ಮುಂಚಿತವಾಗಿ, ತಲಾ ಅಳವಡಿಸುವಿಕೆಗೆ ಸಂಬಂಧಿಸಿ ಒಂದು ಬ್ಲಾಗ್‌ಗೆ ವರ್ಡ್‌ಪ್ರೆಸ್‌‌ ಬೆಂಬಲಿಸುತ್ತಿತ್ತಾದರೂ, ದತ್ತಾಂಶ ಸಂಗ್ರಹದ ಪ್ರತ್ಯೇಕ ಕೋಷ್ಟಕಗಳನ್ನು ಬಳಸಲು ಅನುವಾಗುವಂತೆ ಒಂದು ವೇಳೆ ವಿನ್ಯಾಸಗೊಳಿಸಲಾಗಿದ್ದರೆ, ವಿಭಿನ್ನ ನಿರ್ದೇಶಿಕೆಗಳಿಂದ ಬಹು ಸಹವರ್ತಿ ಪ್ರತಿಗಳನ್ನು ಚಾಲಿಸಲು ಇಲ್ಲಿ ಸಾಧ್ಯವಿತ್ತು. ವರ್ಡ್‌ಪ್ರೆಸ್‌‌ ಮಲ್ಟಿ-ಯೂಸರ್‌‌ (ವರ್ಡ್‌ಪ್ರೆಸ್‌‌ , ಅಥವಾ ಕೇವಲ ) ಎಂಬುದು ವರ್ಡ್‌ಪ್ರೆಸ್‌‌ನ ಒಂದು ಕವಲೊಡೆತವಾಗಿದ್ದು, ಒಂದು ಕೇಂದ್ರೀಕೃತ ನಿರ್ವಾಹಕನಿಂದ ನಿರ್ವಹಿಸಲ್ಪಡಲು ಸಮರ್ಥವಾಗಿರುವ ಒಂದೇ ಅಳವಡಿಕೆಯ ವ್ಯಾಪ್ತಿಯೊಳಗೆ ಅನೇಕ ಬ್ಲಾಗ್‌ಗಳು ಅಸ್ತಿತ್ವ ಕಂಡುಕೊಳ್ಳುವುದಕ್ಕೆ ಅವಕಾಶ ನೀಡಲೆಂದು ಇದು ಸೃಷ್ಟಿಸಲ್ಪಟ್ಟಿದೆ. ವೆಬ್‌ಸೈಟ್‌ ಒಂದನ್ನು ಹೊಂದಿರುವವರು ತಮ್ಮದೇ ಆದ ಬ್ಲಾಗಿಂಗ್‌ ಸಮುದಾಯವನ್ನು ಆಯೋಜಿಸಲು ಅವಕಾಶ ನೀಡುವುದೇ ಅಲ್ಲದೇ, ಒಂದು ಸಲಕರಣೆಯ ಗೂಡಿನಿಂದ ಎಲ್ಲಾ ಬ್ಲಾಗ್‌ಗಳನ್ನೂ ನಿಯಂತ್ರಿಸುವ ಹಾಗೂ ಮಧ್ಯಸ್ಥಿಕೆ ವಹಿಸುವ ಪ್ರಕ್ರಿಯೆಯನ್ನು ವರ್ಡ್‌ಪ್ರೆಸ್‌‌ ಕಾರ್ಯಸಾಧ್ಯವಾಗಿಸುತ್ತದೆ. ಪ್ರತಿ ಬ್ಲಾಗ್‌ಗೆ ಸಂಬಂಧಿಸಿದಂತೆ ಎಂಟು ಹೊಸ ದತ್ತಾಂಶ ಕೋಷ್ಟಕಗಳನ್ನು ವರ್ಡ್‌ಪ್ರೆಸ್‌‌ ಸೇರ್ಪಡೆ ಮಾಡುತ್ತದೆ. ೩.೦ರ ಆವೃತ್ತಿಯ ಬಿಡುಗಡೆಯ ಭಾಗವಾಗಿ ವರ್ಡ್‌ಪ್ರೆಸ್‌‌ನೊಂದಿಗೆ ವರ್ಡ್‌ಪ್ರೆಸ್‌‌ ವಿಲೀನಗೊಂಡಿತು. == ಅತಿ ಮಹತ್ವದ ಅಭಿವರ್ಧಕರು == ಮ್ಯಾಟ್‌ ಮುಲ್ಲೆನ್‌ವೆಗ್‌ ಮತ್ತು ಮೈಕ್‌ ಲಿಟ್ಲ್‌ ಎಂಬಿಬ್ಬರು ಸದರಿ ಯೋಜನೆಯ ಸಹ-ಸಂಸ್ಥಾಪಕರಾಗಿದ್ದರು. ಲೇಖನ ನೀಡುತ್ತಿರುವ ಪ್ರಮುಖ ಅಭಿವರ್ಧಕರಲ್ಲಿ ರೈಯಾನ್‌ ಬೋರೆನ್‌, ಮಾರ್ಕ್‌ ಜಾಕ್ವಿತ್‌‌, ಮ್ಯಾಟ್‌ ಮುಲ್ಲೆನ್‌ವೆಗ್‌, ಆಂಡ್ರ್ಯೂ ಓಜ್‌, ಮತ್ತು ಪೀಟರ್‌ ವೆಸ್ಟ್‌ವುಡ್ ಸೇರಿದ್ದಾರೆ. ಪ್ರತಿ ಬಿಡುಗಡೆಯನ್ನು ಪರೀಕ್ಷಿಸುವ ಸ್ವಯಂಸೇವಕರ ಒಂದು ಗುಂಪಾದ ಟೆಸ್ಟರ್ಸ್‌‌‌ ನ್ನು ಒಳಗೊಂಡಂತೆ, ವರ್ಡ್‌ಪ್ರೆಸ್‌‌ ತನ್ನ ಸಮುದಾಯದಿಂದಲೂ ಅಭಿವೃದ್ಧಿಪಡಿಸಲ್ಪಡುತ್ತದೆ. ರಾತ್ರಿಯಲ್ಲಿ ನಡೆಯುವ ನಿರ್ಮಾಣಗಳು, ಬೀಟಾ ಆವೃತ್ತಿಗಳು ಮತ್ತು ಬಿಡುಗಡೆಯ ಪರೀಕ್ಷಾರ್ಥಿಗಳಿಗೆ ಅವರು ಆರಂಭಿಕ ಸಂಪರ್ಕವನ್ನು ಹೊಂದಿರುತ್ತಾರೆ. ವಿಶೇಷ ಅಂಚೆ ಪಟ್ಟಿಯಲ್ಲಿ, ಅಥವಾ ಯೋಜನೆಯ ಟ್ರಾಕ್‌ ಸಾಧನದಲ್ಲಿ ದೋಷಗಳು ದಾಖಲಿಸಲ್ಪಡುತ್ತವೆ. ವರ್ಡ್‌ಪ್ರೆಸ್‌ ತನ್ನನ್ನು ಸುತ್ತುವರೆದಿರುವ ಸಮುದಾಯದಿಂದ ಬಹುತೇಕವಾಗಿ ಅಭಿವೃದ್ಧಿಪಡಿಸಲ್ಪಡುತ್ತದೆಯಾದರೂ, ಮ್ಯಾಟ್‌ ಮುಲ್ಲೆನ್‌ವೆಗ್‌ನಿಂದ ಸಂಸ್ಥಾಪಿಸಲ್ಪಟ್ಟ ಕಂಪನಿಯಾದ ಆಟೋಮ್ಯಾಟಿಕ್‌ ಜೊತೆಯಲ್ಲಿ ಅದು ನಿಕಟವಾದ ಸಂಬಂಧವನ್ನು ಹೊಂದಿದೆ. == ಇವನ್ನೂ ನೋಡಿ == ಟೆಂಪ್ಲೇಟು: ಪಠ್ಯವಿಷಯದ ನಿರ್ವಹಣಾ ವ್ಯವಸ್ಥೆಗಳ ಪಟ್ಟಿ ಐಕ್ಯಾಲೆಂಡರ್‌ ಬೆಂಬಲದೊಂದಿಗಿನ ಅನ್ವಯಿಕೆಗಳ ಪಟ್ಟಿ ಬಡ್ಡಿಪ್ರೆಸ್‌ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ವರ್ಡ್ ಪ್ರೆಸ್ ಓಪನ್ ಡೈರೆಕ್ಟರಿ ಪ್ರಾಜೆಕ್ಟ್ – 2014-12-22 ವೇಬ್ಯಾಕ್ ಮೆಷಿನ್ ನಲ್ಲಿ.